Changing Concept in Matchmaking

"ಕಾಲಾಂತರದಿಂದ ಬದಲಾಗುತ್ತಿರುವ ಮದುವೆಯ ಸ್ವರೂಪ"

ನಮ್ಮ ಹಿಂದೂ ಸಂಸ್ಕೃತಿಯ 16 ಸಂಸ್ಕಾರದಲ್ಲಿ ಮದುವೆ ವಂದು ಮಹತ್ವದ ಸಂಸ್ಕಾರವಾಗಿದೆ. ಮದುವೆಗೆ ನಮ್ಮ ಸಂಕೃತಿಯಲ್ಲಿ ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿಯೂ ಸಹ ಅತ್ಯಂತ ಮಹತ್ವವನ್ನು ಕೊಟ್ಟಿದ್ದಾರೆ. ವಂದು ಸಂಸ್ಕಾರಯುಕ್ತ ಸುದೃಡ, ಸಮೃದ್ಧ ಪೀಡಿಯು ಇದರಿಂದ ನಿರ್ಮಾಣವಾಗಬೇಕೆಂಬುದು  ಅಪೇಕ್ಷಿತವಾಗಿರುತ್ತದೆ . 
                 ಮದುವೆ ಎಂದರೆ ಎರಡು ಜೀವಗಳೇ ಅಲ್ಲ ಆದರೆ ಎರಡು ಕುಟುಂಬಗಳು ವಂದಾಗಬೇಕು. ಒಳ್ಳೆ ಮತ್ತು ಕೆಟ್ಟ ದಿನದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಮೊದಲಿನ ಕಾಲದಲ್ಲಿ  ಮದುವೆಯಾದ ದಂಪತಿಯರು ಇದ್ದ ಪರಿಸ್ಥಿತಿಯಲ್ಲಿ ವಬ್ಬರನೊಬ್ಬರನ್ನು ಅರಿತುಕೊಂಡು ಸುಖವಾಗಿ ಇರುತ್ತಿದ್ದರು  ಆದರೆ ಈಗಿನ ಕಾಲದಲ್ಲಿ ಮದುವೆ ಠರಾಯಿಸುವ ಪ್ರಕ್ರಿಯೆಯಿಂದ ಹಿಡಿದು ಮದುವೆಯಾದ ದಂಪತಿಯರ ಸಾಮಾಜಿಕ, ವೈಚಾರಿಕ, ಆರ್ಥಿಕ ಅಡತಳೆಗಳ್ಳನ್ನು ನೋಡಿದರೆ ನಮ್ಮ ಈ ವಿವಾಹ ಸಂಸ್ಕಾರವು ಯಾವ ಮಾರ್ಗದಲ್ಲಿ ಹೋಗುತ್ತಾ ಇದೆ ಅನ್ನುವ ವಿಚಾರವೇ ಭೀಷಣ ವಾಗಿದೆ . 
        ಬೆಳೆಯುತ್ತಿರುವ ಅತೀ ಅಪೇಕ್ಷೆ , ಆತ್ಮ ವಿಶ್ವಾಸದ ಅಭಾವ, ರಂಜಕ ವಿಚಾರ ಇವೆ ಮುಖ್ಯವಾಗಿ ಮದುವೆ ಠರಾಯಿಸುವ ಮಾರ್ಗದಲ್ಲಿ ಅಡಥಳೆಗಳಾಗಿವೆ. ಅದ್ದಕ್ಕಾಗಿ ಮದುವೆ ಯಂಥ ಪವಿತ್ರ ಬಂಧನದಲ್ಲಿ ಬಂಧಿತರಾಗುವಾಗ ನಿಮ್ಮ ಜೊತೆಗಾತಿ  ಅಥವಾ ಜೊತೆಗಾರನ ರೂಪ,  ಸೌಂದರ್ಯ , ಹಣ , ಮತ್ತು ಪ್ರೊಪರ್ಟಿ ಅಷ್ಟೇ ನೋಡಲಾರದೆ ಅವನ ಅಥವಾ ಅವಳ ಸ್ವಭಾವ , ವೈಚಾರಿಕ ಕ್ಷಮತೆ , ಕುಟುಂಬದ ಮಾಹಿತಿ ಇದರ ಬಗ್ಗೆಯೂ ವಿಚಾರ ಮಾಡುವದು ಮಹತ್ವದಾಗಿದೆ.

  14th July, 2021

Leave a Comment