maduve / Marriage

ಮದುವೆ

             ಹಿಂದು ಸಂಸ್ಕೃತಿಯ ಹದಿನಾರು ಸಂಸ್ಕಾರದಲ್ಲಿ ಮದುವೆ ಅತ್ಯಂತ ಮಹತ್ವವಾದ ಸಂಸ್ಕಾರವಾಗಿದೆ . ಅದಕ್ಕಾಗಿ ಪುರಾತನ ಕಾಲದಿಂದ ಈ ಸಂಸ್ಕಾರಕ್ಕೆ ಅತ್ಯಂತ ಮಹತ್ವವನ್ನು ಕೊಟ್ಟಿದ್ದಾರೆ . ಮದುವೆಯಿಂದ ಎರಡು ಜೀವವೇ ಅಲ್ಲದೆ ಎರಡು ಕುಟುಂಬಗಳು ವಂದಾಗುತ್ತವೆ .  ಕಾಲವು ಮುಂದೆ ಸರಿಯುತ್ತಿದ್ದಂತೆ  ಮದುವೆಯ ಸ್ವರೂಪವು ಬದಲಾಗುತ್ತಾ ಬಂದಿದೆ .

     ಮೊದಲಿನ ಕಾಲದಲ್ಲಿ ತಂದೆ ತಾಯಿಯರು ನಿಶ್ಚಯಿಸಿದವರ ಜೊತೆ ವಧುವರರು ವಪ್ಪಿಕೊಂಡು ಮದುವೆಯಾಗುತ್ತಿದ್ದರು  . ಆದರೆ ಈಗಿನ ಕಾಲದಲ್ಲಿ ವಧುವರರ ವಪ್ಪಿಗೆಯೇ ಮಹತ್ವದ್ದಾಗಿದೆ . ಆಮೇಲೆ ಕುಟುಂಬದವರು ಸಹಭಾಗಿಗಳಾಗುತ್ತಾರೆ . ಈಗಿನ ಸ್ಥಿತಿ ನೋಡಿದರೆ ಮದುವೆಯ ಪ್ರಕ್ರೀಯೆ  ಅಷ್ಟೊಂದು ಸುಲಭವಾಗಿಲ್ಲಾ  . ಶಿಕ್ಷಣದ ಮಹತ್ವವು ಹೆಚ್ಚಾಗಿದೆ . ಆರ್ಥಿಕ ಸ್ವತಂತ್ರತೆಯೂ ಬೆಳೆದಿದೆ . ಅದರ ಜೊತೆ ವಧುವರರ ಅಪೇಕ್ಷೆಯು ಬೆಳೆದಿದೆ . ಮದುವೆ ನಿಶ್ಚಯಿಸುವ  ಪ್ರಕ್ರೀಯೆಯಲ್ಲಿ ಈ ಆಪೇಕ್ಷೆಯೇ  ವಂದು ಅಡಚಣೆಯಾಗಿದೆ  . ಈ ಶೋಧನೆ ಕಾರ್ಯದಿಂದ ಹಿಡಿದು ಮದುವೆಯವರೆಗೆ ವಧು ವರ ಮತ್ತು ಅವರ ಪಾಲಕರುಗಳಿಗೆ  ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ .

 ಇವೆಲ್ಲಾ ಅಡಚಣೆಗಳು ಯಾವವು ?

ಹೇಗೆ  ನಿರ್ಮಾಣ ಆಗುತ್ತವೆ ?

ಯಾಕೆ ನಿರ್ಮಾಣ ಆಗುತ್ತವೆ ?

      ಇದರ ಮೇಲೆ ವಧು ವರ ಮತ್ತು ಅವರ ತಂದೆ ತಾಯಿಯರು ಚರ್ಚೆ ಮಾಡುವ ಅವಶ್ಯಕತೆ ಇದೆ . ಇದರಿಂದ ವಧುವರರ  ಮದುವೆಯು ಸರಿಯಾದ ಸಮಯದಲ್ಲಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ .

 

 ಸಪ್ತಪದಿ ವಿವಾಹ

  28th June, 2020

Leave a Comment