Initial consent for Matrimonial Search - prarthimaka vappige

ಪ್ರಾಥಮಿಕ ಒಪ್ಪಿಗೆ

ಇವತ್ತು ಜೋಶಿಯವರು ಬಹಳ ಸಿಟ್ಟಿನಲ್ಲಿದ್ದರು . ಕಾರಣ ಕೇಳಿದಾಗ ಜೋಶಿ ಮತ್ತು ಅವರ ಮಗ ರೋಹನ ಇಬ್ಬರಲ್ಲಿ ಜೋರಾಗಿ ಜಗಳವಾಗಿತ್ತು . ಯಾಕೆಂದರೆ ಜೋಶಿಯವರು ಮಗನ ಸಲುವಾಗಿ ವಧು ಸಂಶೋಧನೆ ನಡೆಸಿದ್ದರು . ೨-೩ ದಿನದಲ್ಲಿ ವಧುವಿನ ಕಡೆಯವರಿಗೆ ಭೇಟಿಯಾಗಲು ಮನೆಗೆ ಕರೆದಿದ್ದರು . ರೋಹನನಿಗೆ ಇವರ ಬಗ್ಗೆ ಹೇಳಿದಾಗ ಅವನು ಅವರನ್ನು ಭೇಟ್ಟಿ ಯಾಗಲಿಕ್ಕೆ ತಯಾರಾಗಲಿಲ್ಲ . ಆಗ ನಾನು ಜೋಶಿಯವರಿಗೆ ಕೇಳಿದೆ ಯಾಕೆ ? ನೀವು ಮೊದಲೇ ರೋಹನನಿಗೆ ಇದರ ಬಗ್ಗೆ ಕೇಳಿರಲಿಲ್ಲವಾ ? ಆಗ ಅವರಂದರು ನಾನು ವಂದು ಸಲ ಅವನಿಗೆ ಹೇಳಿದ್ದೆ , ನಿನಗೆ ೨೯ ವರ್ಶದವನಾಗಿದ್ದೀಯಾ , ಈಗ ವಧು ಸಂಶೋಧನೆ ಮಾಡಬೇಕು . ಆಗ ಅವನು ಆಗಲಿ ನೋಡೋಣ ಆಂದಿದ್ದ . ಚಿಕ್ಕವನಿಂದಲೂ ಇವನ taste , likes , dislikes ನನಗೆ ಗೊತ್ತಿರೋದರರಿಂದ ನಾನು ವಧುಗಳ ಸ್ಥಳಗಳನ್ನು ನೋಡಿ shortlist ಮಾಡಿ ಅವನಿಗೆ ತೋರಿಸಿ ಕೊನೆ ನಿರ್ಣಯ ಅವನೇ ಮಾಡೋದು ಅನಕೊಂಡಿದ್ದೆ . ಆದರೆ ಈಗ ಆಗಿರೋದೇ ಬೇರೆ . ಈಗಿನ ಪಿಡಿಯೇ ಬೇರೆ ಅವರು ಒಳ್ಳೆ ಶಿಕ್ಷಣ ತೊಗೊಂಡಿರುತ್ತಾರೆ , ಆರ್ಥಿಕವಾಗಿ ಸ್ವತಂತ್ರವಾಗಿರುತ್ತಾರೆ . ಅವರ priorities ಸಹಾ clear ಇರುತ್ತವೆ . ಅದಕ್ಕೆ ವಧು - ವರರ ಸಂಶೋಧನೆ ಕಾರ್ಯ ಮಾಡುವ ಮೊದಲು ಅವರು ಮಾನಸಿಕವಾಗಿ ಮದುವೆಗೆ ತಯಾರಾಗಿದ್ದಾರೆಯೇ ? ಅಥವಾ ಅವರು ತಮ್ಮಸಂಗಾತಿಯನ್ನು ನೋಡಿ ಇಟ್ಟಿದ್ದಾರೆಯೇ . ಎಲ್ಲದಕ್ಕಿಂತಲೂ ಮೊದಲಿಗೆ ಅವರು ನಿಮಗೆ ಮದುವೆಯಾಗಲು ಒಪ್ಪಿಗೆ ಕೊಟ್ಟಿದ್ದಾರೆಯೇ? ಇದರ ಬಗ್ಗೆ ಚರ್ಚೆ ಯಾಗಬೇಕು . ನಿಮಗೆ ಏನು ಅನಿಸುತ್ತದೆ ?

Smt Arundhati A Sukhatankar

Saptapadi Vivah

https://youtu.be/709heCZoPqs

  15th July, 2020

Leave a Comment